3 ವರ್ಷಗಳ ಯಾವುದೇ ಬ್ರ್ಯಾಂಚ್ನಲ್ಲಿನ ಡಿಪ್ಲೊಮ ಶಿಕ್ಷಣ ಮುಗಿಸಿದ್ದು, ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಸೀಟು ಪಡೆದು ಪ್ರವೇಶ ಪಡೆಯಲು ಅಥವಾ ನೇರವಾಗಿ ಎರಡನೇ ವರ್ಷದ ಇಂಜಿನಿಯರಿಂಗ್ ಕೋರ್ಸ್ಗೆ ಸೇರಬೇಕು ಎಂದುಕೊಂಡವರಿಗೆ ಪ್ರವೇಶದಾರಿಯಾದ ಡಿಪ್ಲೊಮ - ಸಾಮಾನ್ಯ ಪ್ರವೇಶ ಪರೀಕ್ಷೆ 2024 ಗೆ ಸಂಬಂಧ, ಇದೀಗ ನೋಟಿಫಿಕೇಶನ್ ಹಾಗೂ ಅರ್ಜಿ ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತರು ಅರ್ಹರು ಇಂದಿನಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆಗಳು :
ಬಿಇ ಕೋರ್ಸ್ಗಳ ಪ್ರವೇಶಕ್ಕೆ : ಡಿಪ್ಲೊಮ ವಿದ್ಯಾರ್ಹತೆಯನ್ನು ಕನಿಷ್ಠ ಶೇಕಡ.45 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಎಸ್ಸಿ/ ಎಸ್ಟಿ ಅಭ್ಯರ್ಥಿಗಳಾಗಿದ್ದಲ್ಲಿ ಶೇಕಡ.40 ಅಂಕಗಳೊಂದಿಗೆ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.
ಬಿ.ಆರ್ಕ್ ಕೋರ್ಸ್ ಪ್ರವೇಶಕ್ಕೆ : NATA ಪರೀಕ್ಷೆ ಬರೆದು ಶೇಕಡ.40 ಅಂಕಗಳನ್ನು ಗಳಿಸಿರಬೇಕು. ಜತೆಗೆ 10+2 ಶಿಕ್ಷಣದಲ್ಲಿ ಪಿಸಿಎಂ ವಿಷಯ ಓದಿರಬೇಕು. ಅಥವಾ ಡಿಪ್ಲೊಮದಲ್ಲಿ ಗಣಿತ ಓದಿದ್ದು ಕನಿಷ್ಠ ಶೇಕಡ.50 ಅಂಕಗಳನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು/ ವಿವರಗಳು
2) 12ನೇ ತರಗತಿ / ದ್ವಿತೀಯ ಪಿಯುಸಿ ಅಂಕಪಟ್ಟಿ (ಇದ್ದರೆ)
3) ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು
4) ಕರ್ನಾಟಕದಲ್ಲಿ ಅಧ್ಯಯನ ಮಾಡಿದ ವಿವರಗಳು
5) ಜೆಪಿಜಿ ಮಾದರಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
6) ಜೆಪಿಜಿ ಮಾದರಿಯ ಅಭ್ಯರ್ಥಿಯ ಸಹಿ ಸ್ಕ್ಯಾನ್ ಕಾಪಿ.
ಪ್ರಮುಖ ದಿನಾಂಕಗಳು
ಆರಂಭಿಕ ದಿನಾಂಕ : 03-05-2024
ಕೊನೆ ದಿನಾಂಕ: 15-05-2024 ರ ರಾತ್ರಿ 11-59 ರವರೆಗೆ.
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ:
18-05-2024 ರ ಸಂಜೆ 06-00 ಗಂಟೆವರೆಗೆ.
ಆನ್ಲೈನ್ ಪರೀಕ್ಷೆ ದಿನಾಂಕ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.
ಪ್ರಮುಖ ಲಿಂಕ್.ಗಳು :
ಅರ್ಜಿ ಸಲ್ಲಿಸಲು : ಕ್ಲಿಕ್ ಮಾಡಿ
ನೋಟಿಪಿಕೇಷನ್ : ಕ್ಲಿಕ್ ಮಾಡಿ
ಮಾಹಿತಿ ಪುಸ್ತಕ : ಕ್ಲಿಕ್ ಮಾಡಿ
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮವರೊಂದಿಗೆ ಹಂಚಿಕೊಳ್ಳಿ.. ಹಾಗೆಯೇ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ
#cet, #dcet, #kea, #courses, #Weekly Updates
0 Comments